top of page
ದೇವಾಂಗ ಮಂಡಲಿ (ರಿ.)
ಸಂಸ್ಥೆಯ ಉದ್ದೇಶಗಳು :-
1) ದೊಡ್ಡಬಳ್ಳಾಪುರ ತಾಲ್ಲೂಕಿನ ದೇವಾಂಗ ಮಹಾಜನರ ಆಧ್ಯಾತ್ಮಿಕ ನೈತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪುರೋಭಿವೃದ್ಧಿಗಾಗಿ ಅವಶ್ಯಕವಾದ ಎಲ್ಲಾ ಕಾರ್ಯಗಳನ್ನೂ ಕೈಗೊಳ್ಳುವುದು.
2) ದೇವಾಂಗ ಮಹಾಜನರ ಏಳಿಗೆಗಾಗಿ ಜ್ಞಾನ ಪ್ರಸಾರಣೆ ಕಾರ್ಯವನ್ನು ಕೈಗೊಳ್ಳುವುದು, ತದಂಗವಾಗಿ ಸಂಸ್ಕೃತ ಮತ್ತು ವೇದ ಪಾಠಶಾಲೆಯನ್ನು ಮತ್ತು ವಿದ್ಯಾರ್ಥಿನಿಲಯ (Hostel) ವನ್ನು ಏರ್ಪಡಿಸಿ ಅವಕ್ಕೆ ಬೇಕಾಗುವ ಹಣಸಹಾಯವನ್ನು ಒದಗಿಸುವುದು.
3) ದೊಡ್ಡಬಳ್ಳಾಪುರದ ಟೌನ್ ನಲ್ಲಿರುವ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಎಲ್ಲಾ ವಿಧವಾದ ಪೂಜಾ ಕಾರ್ಯಗಳಿಗೂ ಮತ್ತು ದೇವಸ್ಥಾನದ ಸಿಬ್ಬಂದಿಯವರ ಸಂಬಳ ಸಾರಿಗೆಗಳಿಗೂ, ಹಣಸಹಾಯವನ್ನು ಒದಗಿಸುವುದು.
4) ಸಂಸ್ಥೆಯ ವ್ಯಾಪ್ತಿ
ದೊಡ್ಡಬಳ್ಳಾಪುರ ತಾಲ್ಲೂಕ್,
5) ಸಂಸ್ಥೆಯ ಕಾರ್ಯಾಲಯ :
ಈ ಸಂಸ್ಥೆಯ ಕಾರ್ಯಾಲಯವು ದೊಡ್ಡಬಳ್ಳಾಪುರದ ಟೌನ್ ನ ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಹೊರ ಆವರಣದ ಒಂದು ಕೊಠಡಿಯಲ್ಲಿ ಇರತಕ್ಕದ್ದು.

ನಮ್ಮ ಬಗ್ಗೆ: About Us
bottom of page